ಏನಿದು ಓಲಾ ಕೊಡುಗೆಗಳು?

ಓಲಾ ಜೊತೆ ಅತಿ ಹೆಚ್ಚು ಚಲಿಸಿರುವ ಚಾಲಕ ಬಂಧುಗಳಿಗೆ ಮಾತ್ರ ಸೀಮಿತವಾದ ಕೊಡುಗೆಗಳು ಇವು. ನಿಮ್ಮ ಶ್ರಮಕ್ಕೆ ನಮ್ಮ ಕೃತಜ್ಞತೆ ತೋರಲು ಈ ಕಾರ್ಯಕ್ರಮವನ್ನು ಶುರು ಮಾಡಿದ್ದೇವೆ. ನಿಮ್ಮ ಓಲಾ ಇಂಸೆಂಟಿವ್ ಹಾಗು ಬೋನಸ್ ಅಲ್ಲದೆ ಹೆಚ್ಚುವರಿ ಕೊಡುಗೆಗಳನ್ನು ನಾವು ಇಲ್ಲಿ ತರುತ್ತಿದ್ದೇವೆ.

ಇದು ನಮ್ಮ ಇಂಸೆಂಟಿವ್ ಹಾಗು ಬೋನಸ್ ಬದಲು ಸಿಗುವುದೇ?

ಖಂಡಿತ ಇಲ್ಲ. ನಿಮ್ಮ ಓಲಾ ಇಂಸೆಂಟಿವ್ ಹಾಗು ಬೋನಸ್ ಯಥಾ ರೀತಿ ಸಿಗುತ್ತಲೇ ಇರುವುದು. ಇಲ್ಲಿ ನಾವು ಹೆಚ್ಚುವರಿ ಕೊಡುಗೆಗಳನ್ನು ತರುತ್ತಿದ್ದೇವೆ.

ಮತ್ತೆ ಇದು ಯಾಕೆ ಕೊಡುವುದು ನಮಗೆ?

ಕಳೆದ 30 ದಿನಗಳು ನೀವು ಓಲಾ ಜೊತೆ ಹೆಚ್ಚು ಚಲಿಸಿರುವ ಕಾರಣ ನಿಮ್ಮನ್ನು ಗುರುತಿಸಲಾಗಿದೆ. ಅಂತ ಚಾಲಕ ಬಂಧುಗಳಿಗೆ ಮಾತ್ರ ಈ ಕೊಡುಗೆಗಳು ದೊರೆಯುವುದು!

ಮತ್ತೆ ಇದು ಎಷ್ಟು ದಿನಗಳವರೆಗೆ ಸಿಗುವ ಕೊಡುಗೆಗಳು?

ನೀವು ಮುಂಚಿನ ಹಾಗೆಯೇ ಪ್ರತಿ ತಿಂಗಳು ಓಲಾ ಜೊತೆ ಹೆಚ್ಚು ಚಲಿಸುತ್ತ ಇದ್ದರೆ ನಿಮಗೆ ಈ ಕೊಡುಗೆಗಳು ಅಷ್ಟೇ ಅಲ್ಲ ಇನ್ನೂ ಹೆಚ್ಚಿನ ಕೊಡುಗೆಗಳನ್ನು ಓಲಾ ತರುವುದು ನಿಮಗಾಗಿ.

ಹಾಗಿದ್ದರೆ ನಾನು ಎಷ್ಟು ಚಲಿಸಬೇಕು ಓಲಾ ಜೊತೆ?

ನೀವು ಮುಗಿಸುವ ಪ್ರತಿ ಬುಕಿಂಗ್ ಗೆ ಓಲಾ ನೀಡುವುದು ಒಂದು ಪಾಯಿಂಟ್. ಆದರೆ ಅದೇ ಬುಕಿಂಗ್ ಅನ್ನು ನೀವು ಕೆಲವು ನಿರ್ಧಾರಿತ ವೇಳೆಗಳಲ್ಲಿ ಹಾಗು ದಿನಗಳಲ್ಲಿ ಮಾಡಿದರೆ ನಿಮಗೆ ನಾಕು ಪಟ್ಟು ಹೆಚ್ಚು, ಅಂದರೆ ನಾಲ್ಕು ಪಾಯಿಂಟ್ಸ್ ಸಿಗುವುದು ಓಲಾ ಕಡೆ ಇಂದ. ನೀವು ಇಷ್ಟು ಪಾಯಿಂಟ್ಸ್ ಒಟ್ಟು ಕೂಡಿಸುತ್ತೀರೋ ಅಷ್ಟು ಹೆಚ್ಚು ಕೊಡುಗೆಗಳು ಸಿಗುವುದು.

ಇದರಿಂದ ಯಾವ ರೀತಿಯ ಕೊಡುಗೆಗಳು ಸಿಗುತ್ತವೆ ನನಗೆ?

ಓಲಾ ನಿಮಗೆ ನಿಮ್ಮ ವೃತ್ತಿ ಹಾಗು ವೈಯಕ್ತಿಕ ಜೀವನ ಎರಡರಲ್ಲೂ ಉಪಯೋಗ ಆಗುವಂತಹ ಕೊಡುಗೆಗಳನ್ನು ತಂದಿದೆ. ನಿಮ್ಮ ದಿನ ನಿತ್ಯದ ಕಾರಿನ ಖರ್ಚುಗಳನ್ನು ಕಡಿಮೆ ಮಾಡುವಂತಹ ಕೆಲವು ಡಿಸ್ಕೌಂಟ್ ಗಳು ಇವೆ. ಅಷ್ಟೇ ಅಲ್ಲದೆ ನಿಮ್ಮ ಹಾಗು ನಿಮ್ಮ ಮನೆಯವರ ಆರೋಗ್ಯಕ್ಕೆ ಸಂಬಂಧ ಪಟ್ಟ ವಿಷಯಗಳಲ್ಲಿ ಆಗುವ ಖರ್ಚುಗಳನ್ನು ಸಾಕಷ್ಟು ಕಡಿಮೆ ಮಾಡುವ ಕೊಡುಗೆಗಳು ಕೂಡ ಇಲ್ಲಿವೆ. ಅವು ಏನು ಎಂದು ಕೆಳಗೆ ಓದಿ ತಿಳಿಯಿರಿ.

ಈ ಎಲ್ಲ ಕೊಡುಗೆಗಳನ್ನು ನಾನು ಹೇಗೆ ಪಡೆಯುವುದು?

ಈ ಕೊಡುಗೆಗಳನ್ನು ಪಡೆಯುವ ಕ್ರಮ ಕೆಳಕಂಡಂತಿದೆ.

೧. ಈ ಲಿಂಕ್ ಕ್ಲಿಕ್ ಮಾಡಿ ಅಲ್ಲಿ ನಿಮ್ಮ ವಿವರಗಳನ್ನು ತುಂಬಿ 

http://bit.ly/2LI4BYb

ಈ ಲಿಂಕ್ ಕ್ಲಿಕ್ ಮಾಡಿ ಮೊಬೈಲ್ ಆಪ್ ಇನ್ಸ್ಟಾಲ್ ಮಾಡಿ ನಿಮ್ಮ ಫೋನ್ ಅಲ್ಲಿ 

http://bit.ly/2XZAtxX

೩. ನಿಮ್ಮ ವಿವರಗಳನ್ನು ಬಳಸಿ ಆಪ್ ಗೆ ಲಾಗಿನ್ ಆಗಿ 

೪. ನಿಮಗೆ ಇಷ್ಟ ಆದ ಆಫರನು ಕ್ಲಿಕ್ ಮಾಡಿ ಅಲ್ಲಿರುವ ಸೂಚನೆ ಅನ್ನು ಅನುಸರಿಸಿ 

೫. ನಿಮ್ಮ ಕೊಡುಗೆ ನಿಮಗೆ ಒಂದು ಲಿಂಕ್ ಅಥವಾ ಒಂದು ಕೂಪನ್ ಕೋಡ್ ನ ರೀತಿ ಅಲ್ಲಿ ನಿಮಗೆ ಸೇರುವುದು 

೬. ಇಂಟರ್ನೆಟ್ ಅಲ್ಲಿ ಲಿಂಕ್ ಬಳಸಿ ಇಲ್ಲವೇ ಕೂಪನ್ ಕೋಡ್ ಅನ್ನು ಅಂಗಡಿ ಅಲ್ಲಿ ತೋರಿಸಿ ನಿಮ್ಮ ಕೊಡುಗೆಗಳನ್ನು ಪಡೆಯಬಹುದು

ನನಗೆ ಸಿಕ್ಕ ಕೂಪನ್ ಕೋಡ್ ಅನ್ನು ಅಂಗಡಿ ಅಲ್ಲಿ ಒಪ್ಪುತ್ತಿಲ್ಲ. ಏನು ಮಾಡಬೇಕು?

ನಿಮಗೆ ಸಿಗ ಬೇಕಾದ ಯಾವುದೇ ಕೂಪನ್ ಕೋಡ್ ಅಲ್ಲಿ ಏನೇ ಸಂದೇಹ ಇದ್ದರು ಈ ನಂಬರಗೆ ಕರೆ ಮಾಡಿ. ನಿಮಗೆ ಸಸೂಕ್ತ ಆಗುವಂತೆ ಪರಿಹಾರ ನೀಡುವ ಎಲ್ಲ ಪರಿಶ್ರಮ ನಡೆಸಲಾಗುವುದು.

ಈ ಕೊಡುಗೆಗಳು ಸದಾ ನನಗೆ ದೊರುಕುವುದೇ?

ಈ ಕೊಡುಗೆಗಳನ್ನು ನೀವು ಪಡೆಯುತ್ತಲೇ ಇರಲು ನೀವು ಓಲಾ ಒಡನೆ ಚಲಿಸುತ್ತಲೇ ಇರಬೇಕು. ಅಷ್ಟೇ ಅಲ್ಲದೆ ಪ್ರತಿ ತಿಂಗಳು ಸೊನ್ನೆ ಇಂದ ಪಾಯಿಂಟ್ಸ್ ಗಳಿಸಲು ಶುರು ಮಾಡಬೇಕು. ನೆನಪಿರಲಿ ನೀವು ಓಲಾ ಒಡನೆ ಈ ರೀತಿ ಹೆಚ್ಚು ಚಲಿಸುತ್ತ ಇರುವ ಕಾರಣದಿಂದ ಮಾತ್ರ ನಿಮಗೆ ಈ ಸೌಲಭ್ಯಗಳು ದೊರೆಯುತ್ತಿವೆ.

ಇದಕ್ಕೆ ಇನ್ನೂ ಹೆಚ್ಚು ಜನ ಓಲಾ ಚಾಲಕರು ಸೇರಬಹುದೇ?

ಹೌದು. ಪ್ರತಿ ತಿಂಗಳು ನಾವು ಎಲ್ಲ ಚಾಲಕರ ಬುಕಿಂಗ್ ಗಳ ಬಗ್ಗೆ ರಿಪೋರ್ಟ್ ತೆಗೆದು ನೋಡುತ್ತೇವೆ. ಅದರಲ್ಲಿ ನಮ್ಮ ಮಾಪನಕ್ಕೆ ತಕ್ಕ ಬೂಕಿಂಗ್ಸ್ ಮಾಡಿರುವ ಚಾಲಕರನ್ನು ನಾವೇ ಆವಾಹಿಸುತ್ತೇವೆ ಈ ಸೌಲಭ್ಯಗಳನ್ನು ಪಡೆಯಲು. ಇದರಿಂದ ಈ ಕಾರ್ಯಕ್ರಮದಲ್ಲಿ ಸದ್ಯಕ್ಕೆ ಇರುವ ಚಾಲಕರಿಗೆ ಯಾವುದೇ ತೊಂದರೆ ಆಗುವುದಿಲ್ಲ. ಅವರಿಗೆ ಎಲ್ಲ ಸೌಲಭ್ಯಗಳು ಕೊಡುಗೆಗಳು ಮುಂದು ವರೆಯುತ್ತದೆ.

ನನಗೆ ಕೊಡುಗೆಗಳು ಸಿಗುವುದು ನಿಂತಿತು. ಮತ್ತೆ ಹೇಗೆ ಪಡೆಯುವುದು?

ಚಿಂತಿಸಬೇಡಿ. ನೀವು ಮತ್ತೆ ಮೊದಲಿನಂತೆ ಹೆಚ್ಚು ಓಲಾ ಒಡನೆ ಓಡಿಸಿದರೆ ನಿಮ್ಮ ಸೌಲಭ್ಯಗಳನ್ನು ಮತ್ತೆ ಪಡೆಯಲು ಶುರು ಮಾಡಬಹುದು.

ಇಲ್ಲಿರುವ ಕೊಡುಗೆಗಳು ಇಷ್ಟೇ ನಾ?

ಇಲ್ಲ. ಇದು ಈಗಾಗಲೇ ನಾವು ಕೂಡಿಸಿರುವ ಕೊಡುಗೆಗಳು ಅಷ್ಟೇ. ನಾವು ಪ್ರತಿ ದಿನ ಇನ್ನೂ ಹೆಚ್ಚು ಕೊಡುಗೆಗಳನ್ನು ನಿಮಗೆ ತರುವ ಸಾಹಸ ಮಾಡುತ್ತಲೇ ಇದ್ದೇವೆ. ಹೋಗುತ್ತಾ ನೀವು ಇನ್ನೂ ಹೆಚ್ಚು ಸೌಲಭ್ಯಗಳನ್ನು ಅನುಭವಿಸಬಹುದು ಓಲಾ ಜೊತೆ.

ನನಗೆ ಡೀಸೆಲ್ ಹಣ ಯಾವಾಗ ಸಿಗುವುದು?

ನೀವು ಆಗಸ್ಟ್ ತಿಂಗಳಲ್ಲಿ ಪಡೆಯುವ ಪಾಯಿಂಟ್ಸ್ ನಾ ಮೇಲೆ ನಿಮ್ಮ ಡೀಸೆಲ್ ಹಣ ನಿರ್ಧಾರಿತ ಆಗುವುದು. ಹಾಗಾಗಿ ನಿಮಗೆ ಸೆಪ್ಟೆಂಬರಿ ಮೊದಲನೇ ವಾರದಲ್ಲಿ ನಿಮ್ಮ ಹಣ ದೊರೆಯುವುದು. ಮತ್ತಷ್ಟು ಮಾಹಿತಿ ಅನ್ನು ನಾವು ನಂತರ ತಿಳಿಸುತ್ತೇವೆ ನಿಮಗೆ ಖುದ್ದಾಗಿ.

ಈ ಕಾರ್ಯಕ್ರಮ ಅಥವಾ ಆಟ ಇನ್ನೂ ಎಷ್ಟು ದಿನ ನಡೆಯುವುದು?

ಸದ್ಯಕ್ಕೆ ನಾವು ಈ ಆಟ ಅಥವಾ ಕಾರ್ಯಕ್ರಮವನ್ನು ಆಗಸ್ಟ್ ತಿಂಗಳಿಗೆ ಮಾತ್ರ ಸೀಮಿತ ಮಾಡಿದ್ದೇವೆ. ಈ ತಿಂಗಳ ನಂತರ ನಾವು ಇದನ್ನು ಮುಂದುವರೆಸಬೇಕೇ ಇಲ್ಲವೇ ಬೇರೆ ಏನಾದರು ಬದಲಾವಣೆ ಮಾಡಬೇಕೆ ಎಂದು ನಿರ್ಧರಿಸಿ ನಿಮಗೆ ಮತ್ತೆ ತಿಳಿಸುತ್ತೇವೆ. ನಮ್ಮ ಆಸೆ ಇದನ್ನು ಇನ್ನೂ ಹೆಚ್ಚಿನ ಚಾಲಕ ಬಂಧುಗಳಿಗೆ ಶಾಶ್ವತವಾಗಿ ತರಬೇಕು ಎಂದು.

ಇದರಿಂದ ಓಲಾ ಗೆ ಏನು ಲಾಭ?

ನಮ್ಮ ಪ್ರಧಾನ ಗುರಿ ನಮ್ಮ ಜೊತೆಗೂಡಿ ಹೆಚ್ಚು ದುಡಿಯುವ ಚಾಲಕ ಬಂಧುಗಳಿಗೆ ಇಂಸೆಂಟಿವ್ ಹಾಗು ಬೋನಸ್ ಅಲ್ಲದೆ ಇನ್ನೂ ಹೆಚ್ಚು ಸೌಲಭ್ಯಗಳನ್ನು ಹಾಗು ಕೊಡುಗೆಗಳನ್ನು ಕೊಡಬೇಕು ಎಂದು. ಇದರಿಂದ ನಮಗೆ ಆಗುವೆ ಪರೋಕ್ಷ ಲಾಭ ಎಂದರೆ ನಮ್ಮ ಅತ್ಯುನ್ನತ ಚಾಲಕ ಬಂಧುಗಳು ಸದಾ ನಮ್ಮೊಡನೆಯೇ ಇರುವರು ಎಂದು. ಇದರಿಂದ ನಾವು ನೀವು ಇಬ್ಬರು ಬೆಳೆಯುತ್ತೇವೆ. ಅಷ್ಟೇ ನಮ್ಮ ಸ್ವಾರ್ಥ.